ನನ್ನ ಹೆತ್ತಾಕೆಯ ಜನುಮದಿನವಿಂದು
ನನ್ನಪ್ಪನ ಮನದರಸಿಯ ಹುಟ್ಟುಹಬ್ಬವಿಂದು
ನನ್ನ ಅಜ್ಜನ ರಾಜಕುಮಾರಿಯ ಜನುಮದಿನವಿಂದು
ನನ್ನ ಅಜ್ಜಿಯ ಮುದ್ದು ಗೊಂಬೆಯ ಹುಟ್ಟುಹಬ್ಬವಿಂದು
ಒಂಬತ್ತು ತಿಂಗಳು ಹೊತ್ತು, ಹೆತ್ತು ;
ನೀ ತಿನ್ನದಿದ್ದರೂ ಒಂದು ಹೊತ್ತು,
ಕಡಿಮೆ ಮಾಡಲಿಲ್ಲ ನಮಗೊಂದು ತುತ್ತು ||
ದುಡಿಯುವೆ ದಿನವು ನಮಗಾಗಿ ನೀನು
ಅತ್ತಾಗ ನನ್ನ ಕಣ್ಣೀರು ಒರೆಸಿ,
ನಮಗಾಗಿ ನಿನ್ನ ಬೆವರನ್ನು ಹರಿಸಿ ||
ನಿನ್ನವರಿಗಾಗಿ ನಿನ್ನ ಶ್ರಮವನ್ನ ಬೆರೆಸಿ,
ಮನೆಯವರಿಗಾಗಿ ರಕ್ತವನ್ನು ಹರಿಸಿ,
ನಡೆಸುವೆ ನಮ್ಮ ಕಷ್ಟಗಳನ್ನು ಮರೆಸಿ ||
ದೇವರು ಕೊಟ್ಟನು ಸಹನೆಯನ್ನು ನಿನಗೆ
ಸಹಿಸಿಕೊಂಡ ನೋವು ನಿನಗಾದಾಗ ಹೆರಿಗೆ,
ತೋರಿಸಿಕೊಳ್ಳದೆ ನಿನ್ನ ಚಿಂತೆಯನ್ನು ಹೊರಗೆ ||
ಮರೆಯುವೆನು ನಾನು ನನ್ನ ಜಗವ
ನೋಡಿದಾಗ ನಿನ್ನ ಸುಂದರ ಮೊಗವ
ನಿನಗಿದು ಸಮರ್ಪಣೆ ನಾ ಬರೆದೆ ನೂರೊಂದು ಪದವ
ಹುಟ್ಟುಹಬ್ಬದ ಶುಭಾಶಯಗಳು ನನ್ನವ್ವ ||


