Fiction & Poetry
ನನ್ನ ಹೆತ್ತಾಕೆಯ ಹುಟ್ಟುಹಬ್ಬ
0
Portrait_Placeholder
Sri Saanvi.K
Grade: Grade 10
Gemini_Generated_Image_7riex7riex7riex7-1

 

ನನ್ನ ಹೆತ್ತಾಕೆಯ ಜನುಮದಿನವಿಂದು 

 ನನ್ನಪ್ಪನ ಮನದರಸಿಯ ಹುಟ್ಟುಹಬ್ಬವಿಂದು 

 ನನ್ನ ಅಜ್ಜನ ರಾಜಕುಮಾರಿಯ ಜನುಮದಿನವಿಂದು 

 ನನ್ನ ಅಜ್ಜಿಯ ಮುದ್ದು ಗೊಂಬೆಯ ಹುಟ್ಟುಹಬ್ಬವಿಂದು 

 ಒಂಬತ್ತು ತಿಂಗಳು ಹೊತ್ತು, ಹೆತ್ತು ;

 ನೀ ತಿನ್ನದಿದ್ದರೂ ಒಂದು ಹೊತ್ತು,

 ಕಡಿಮೆ ಮಾಡಲಿಲ್ಲ ನಮಗೊಂದು ತುತ್ತು ||

 ದುಡಿಯುವೆ ದಿನವು ನಮಗಾಗಿ ನೀನು

 ಅತ್ತಾಗ ನನ್ನ ಕಣ್ಣೀರು ಒರೆಸಿ,

 ನಮಗಾಗಿ ನಿನ್ನ ಬೆವರನ್ನು ಹರಿಸಿ ||

 ನಿನ್ನವರಿಗಾಗಿ ನಿನ್ನ ಶ್ರಮವನ್ನ ಬೆರೆಸಿ,

 ಮನೆಯವರಿಗಾಗಿ ರಕ್ತವನ್ನು ಹರಿಸಿ,

 ನಡೆಸುವೆ ನಮ್ಮ ಕಷ್ಟಗಳನ್ನು ಮರೆಸಿ ||

 ದೇವರು ಕೊಟ್ಟನು ಸಹನೆಯನ್ನು ನಿನಗೆ 

 ಸಹಿಸಿಕೊಂಡ ನೋವು ನಿನಗಾದಾಗ ಹೆರಿಗೆ,

 ತೋರಿಸಿಕೊಳ್ಳದೆ ನಿನ್ನ ಚಿಂತೆಯನ್ನು ಹೊರಗೆ ||

 ಮರೆಯುವೆನು ನಾನು ನನ್ನ ಜಗವ 

 ನೋಡಿದಾಗ ನಿನ್ನ ಸುಂದರ ಮೊಗವ 

 ನಿನಗಿದು ಸಮರ್ಪಣೆ ನಾ ಬರೆದೆ ನೂರೊಂದು ಪದವ 

 ಹುಟ್ಟುಹಬ್ಬದ ಶುಭಾಶಯಗಳು ನನ್ನವ್ವ ||

FAQs

Share

Facebook
WhatsApp
X

Comment

Leave a Reply